ಮಸ್ಟರ್ಡ್ ಅನಿಲ -
ರಾಸಾಯನಿಕ ದ್ರವಾನಿಲ (ಮಸ್ಟರ್ಡ್ ಲಿಕ್ವಿಡ್ ಗ್ಯಾಸ್). ರಾಸಾಯನಿಕ ಸೂತ್ರ []. ಡೈಕ್ಲೋರೊ ಡೈಈಥೈಲ್‍ಸಲ್ಛೈಡ್ ಇದರ ವ್ಶೆಜ್ಞಾನಿಕ ಹೆಸರು. ಮಸ್ಟರ್ಡ ಅನಿಲ, ನೈಟ್ರೊಜನ್ ಮಸ್ಟರ್ಡ ಮತ್ತು ಲೆವಿಸ್ಶೆಟ್‍ಗಳು ಬ್ಲಿಸ್ಟರ್ ಅನಿಲಗಳ ವರ್ಗಕ್ಕೆ ಸೇರಿವೆ. ಈ ಅನಿಲವನ್ನು ತುಂಬಿರುವ ಪಾತ್ರೆಗಳ ಮೇಲೆ ಆ ಸೂಚಕವಾಗಿ ಹಸುರು ಪಟ್ಟಿ ಅಂಟಿ ಸಿರುತ್ತಾರೆ. ಈ ಅನಿಲ ಕಣ್ಣು ಮತ್ತು ಫೂಫ್ಛೂಸಗಳು ಮೇಲೆ ಬಲು ಹಾನಿ ಉಂಟುಮಾಡುತ್ತವೆ. ಚರ್ಮದ ಮೇಲೆ ಬಿದ್ದರೆ ಬೊಬ್ಬೆ ಉಂಟಾಗುತ್ತದೆ. 

	ರಿ ಕೀ ಎಂಬ ವಿಜ್ಞಾನಿ ಕ್ಲೋರೀನ್ ಮತ್ತು ಈಥೈಲ್‍ಸಲ್ಫೈಡ್‍ಗಳ ರಾಸಾಯನಿಕ ಸಂಯೋಜನೆಯಿಂದ ಈ ಅನಿಲವನ್ನು ಮೊತ್ತ ಮೊದಲಿಗೆ (1854) ತಯಾರಿಸಿದ. ಶುದ್ದರೂಪದ ಮಸ್ಟರ್ಡ್ ಅನಿಲವನ್ನು ಎಥಿಲೀನ್ ಕ್ಲೋರೊಡೈಡ್ರಿನ್ ಮತ್ತು ಸೋಡಿಯಮ್ ಸಲ್ಪೈಡ್‍ಗಳ ವರ್ತನೆಯಿಂದ ವಿಕ್ಟರ್ ಮೇಯರ್ ತಯಾರಿಸಿದ. ಹೈಡ್ರೊಕ್ಲೋರಿಕ್ ಆಮ್ಲವನ್ನು ಈ ಎರಡು ಸಂಯುಕ್ತಗಳ ಜೊತೆಯಲ್ಲಿ ಬಳಸಲಾಯಿತು. ಸಲ್ಫರ್ ಕ್ಲೋರೈಡ್ ಮತ್ತು ಎಥಿಲೀನಗಳನ್ನು ವರ್ತಿಸಿ (300) ಅಧಿಕ ಮೊತ್ತದಲ್ಲಿ ಮಸ್ಟರ್ಡ್ ಅನಿಲವನ್ನು ತಯಾರಿಸುತ್ತಾರೆ. ಈ ಅನಿಲವನ್ನು ಥಯೊಡೈಗ್ಲೈಕಾಲ್ ಮತ್ತು ಹೈಡ್ರೊಜನ್ ಕ್ಲೋರೈಡ್‍ಗಳ ರಾಸಾಯನಿಕ ಸಂಯೋಜನೆಯಿಂದಲೂ ಪಡೆಯಬಹುದು. 

	ಶುದ್ಧ ಮಸ್ಟರ್ಡ್ ಅನಿಲ ಬಣ್ಣವಿಲ್ಲದ ಎಣ್ಣೆಯಂಥ ದ್ರವ. ಆದರೆ ವಾಣಿಜ್ಯ ಗಾತ್ರದಲ್ಲಿ ಬಳಸುವ ಅನಿಲಕ್ಕೆ ಕಂದುಬಣ್ಣವಿರುತ್ತದೆ. ದ್ರವರೂಪದ ಈ ಅನಿಲ ನಿಧಾನವಾಗಿ ಅವಿಯಾಗುತ್ತದೆ. ಘಾಟುವಾಸನೆ ಹೊಂದಿರುವಂಥದು, ರಬ್ಬರಿನ ಮೂಲಕ ಇದು ಹೀರಲ್ಪಡುತ್ತದೆ. ಚರ್ಮ ಮತ್ತು ನೇಯ್ದ ವಸ್ತುಗಳನ್ನು ಬಾಧಿಸುವುದುಂಟು. ನೀರಿನಲ್ಲಿ ವಿಭಜನೆ ಹೊಂದುತ್ತದೆ. ಸಾಪೇಕ್ಷಸಾಂದ್ರತೆ 1.2741 (200ಅ) ಸಾಪೇಕ್ಷ ಘನಗಾತ್ರ 0.785 (200ಅ); ಕುದಿಬಿಂದು 217.50ಅ ಮತ್ತು ದ್ರವನ ಬಿಂದು 14.40ಅ ಆವಿಯ ಸಾಂದ್ರತೆ 5.4; ಅವಿಯ ಒತ್ತಡ 0.115(200ಅ); ಬಾಷ್ಟಶೀಲತೆ 0.625 ಮಿಲಿಗ್ರಾಮ್ ಲೀ; ಉಷ್ಣ ವಿಕಾಸಾಂಕ 0.000881. ಈ ಅನಿಲ ಈಥೈಲ್ ಆಲ್ಕೊಹಾಲ್, ಬೆನ್‍ಜೀನ್, ಈಥರ್, ಸೀಮೆಎಣ್ಣೆ, ಕಾರ್ಬನ್‍ಡೈಸಲ್ಫೈಡ್, ಎಣ್ಣೆ ಮತ್ತು ಕೊಬ್ಬುಗಳಲ್ಲಿ ವಿಲೀನಗೊಳ್ಳುತ್ತದೆ. 

	ಮಸ್ಟರ್ಡ್ ಅನಿಲದ ದ್ರವ ಬಲು ಅಪಾಯಕಾರಿ. ಈ ದ್ರವದಿಂದ ಉತ್ಪತ್ತಿ ಯಾದ ಅನಿಲ ಸುತ್ತಮುತ್ತಲೂ ಪ್ರಸರಿಸಿ ಇಡೀ ವಾತಾವರಣವನ್ನು ಮಲಿನ ಗೊಳಿಸುತ್ತದೆ. ಆವಿ ತೀವ್ರ ವಿಷಕಾರ. ಇದನ್ನು ಯುದ್ಧ ಕಾರ್ಯಾಚರಣೆಗಳಲ್ಲಿ ವಿಷಾಲನಿಲವಾಗಿ ಬಳಸುತ್ತಾರೆ. ಆಗ್ರ್ಯಾನಿಕ್ ಸಂಯುಕ್ತಗಳ ತಯಾರಿಕೆಯಲ್ಲಿ ಇದರ ಉಪಯೋಗವಿದೆ. 
(ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ